ವ್ಹೀಲ್ ಚೇರ್ ರೋಮಿಯೋ ಜಿ ನಟರಾಜ್ ನಿರ್ದೇಶನದ 2022 ರ ಭಾರತೀಯ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ . ಚಿತ್ರವನ್ನು ಟಿ ವೆಂಕಟಾಚಲಯ್ಯ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಮ್ ಚೇತನ್, ಮಯೂರಿ ಕ್ಯಾತರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ ಮತ್ತು ತಬಲಾ ನಾಣಿ ನಟಿಸಿದ್ದಾರೆ. ಸಂತೋಷ್ ಪಂಡಿತ್ ಛಾಯಾಗ್ರಹಣ ಮತ್ತು ಭರತ್ ಬಿಜೆ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರವು 27 ಮೇ 2022 ರಂದು ಬಿಡುಗಡೆಯಾಯಿತು. == ಪಾತ್ರವರ್ಗ == ಉಲ್ಲಾಸ್ ಪಾತ್ರದಲ್ಲಿ ರಾಮ್ ಚೇತನ್ ಡಿಂಪಲ್ ಪಾತ್ರದಲ್ಲಿ ಮಯೂರಿ ಕ್ಯಾತಾರಿ ಜಾಕ್ ಮಾಮಾ ಪಾತ್ರದಲ್ಲಿ ರಂಗಾಯಣ ರಘು ಪ್ರಸಾದ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಗಿರಿ ಪಾತ್ರದಲ್ಲಿ ಗಿರೀಶ್ ಶಿವಣ್ಣ ಆಟೋಶಂಕರ್ ಆಗಿ ತಬಲಾ ನಾಣಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವ್ಹೀಲ್ ಚೇರ್ ರೋಮಿಯೋ @ ಐ ಎಮ್ ಡಿ ಬಿ